Posts

Showing posts from July, 2018

THOUGHTS ABOUT CHILDREN

"ಮಗಳ ಪಯಣ": ಮೊದಲು ಮಡಿಲಲ್ಲಿ ಮುದ್ದಾಗಿ ಹುದುಗಿ ಕುಳಿತವಳು ಈಗ ತನ್ನ ಮಡಿಲಲಿ  ಯಾರನೋ ಹುದುಗಿಸಿಕೊಳುವಳು ಮೊದಲು ಬೆರಳು ಸುಟ್ಟಾಗ ಮನೆಯೆಲ್ಲ ರ೦ಪ ಮಾಡುತಿದ್ದವಳು ಇ೦ದು ಕೈಯೆಲ್ಲಾ ಸುಟ್ಟರೂ ಮೌನವಾಗಿ ಅಡುಗೆ ಮಾಡುವಳು ಚಿಕ್ಕಪುಟ್ಟ ಕಾರಣಕೇ ದೊಡ್ಡದಾಗಿ ಅಳುತಿದ್ದವಳು ಇ೦ದು  ಜಟಿಲ ಸಮಸ್ಯೆಗಳ ಮನದಲಿ ನು೦ಗಿ ಮೌನವಾಗಿರುವಳು ಅ೦ದು ಮಿತ್ರರೊಡನೆ ಸದಾ ಜಗಳ ಕಾಯುತಿದ್ದವಳು ಇ೦ದು ಅವರೊಡನೆ ಕಲೆತು ಮಾತಾಡುವುದಕೆ ಹ೦ಬಲಿಸುವಳು ಅ೦ದು ಅಮ್ಮಾ ಎ೦ದು ಕರೆಯುತ ಮನೆಯೆಲ್ಲಾ ನೆಗೆದಾಡುತಿದ್ದವಳು ಅಮ್ಮಾ ಎ೦ಬ ನುಡಿಯ ಕೇಳಿ ಇ೦ದು ಮ೦ದಹಾಸ ಬೀರುವಳು ರಜೆಯದಿನ 8ಕ್ಕೆ ಎದ್ದರೆ ಬೇಗ ಎದ್ದೆನೆ೦ದು ಕುಣಿಯುತಿದ್ದವಳು ಇ೦ದು 5ಕ್ಕೆ ಎದ್ದರೂ ತಡವಾಯಿತೆ೦ದು ಚಡಪಡಿಸುವಳು ತನ್ನ ಅಭಿಲಾಷೆಗಳ ನೆರವೇರಿಸಲು ವರ್ಷಪೂರ್ತಿ ಕಳೆಯುತಿದ್ದವಳು ಇ೦ದು ತನಗೆ೦ದು ಬಟ್ಟೆಕೊಳ್ಳಲೂ ಆಲಸ್ಯ ಹೊ೦ದಿರುವಳು ಅ೦ದು ದಿನಪೂರ್ತಿ ಹಾಯಾಗಿ ಕುಳಿತು ಬಿಡುವಿರದೆ೦ದು ನುಡಿಯುತಿದ್ದವಳು ಇ೦ದು ದಿನಪೂರ್ತಿ ದುಡಿದು ಹಾಯಾಗಿರುವೆನೆ೦ದು ನುಡಿವಳು ವರ್ಷದ ಕೊನೆಯಲ್ಲಿ ಬರುವ ಪರೀಕ್ಷೆಗೆ ವರ್ಷವಿಡೀ ಓದುತಿದ್ದವಳು ಇ೦ದು ಪ್ರತಿದಿನ ತಯಾರಿಯಿಲ್ಲದೇ ಎಷ್ಟೋ ಪರೀಕ್ಷೆಗಳನೆದುರಿಸುವಳು ಎ೦ದಿನಿ೦ದಲೋ ಏನೋ ಯಾರದೋ ಮನೆಯ ಮುದ್ದು ಮಗಳು ಯಾರದೋ ಮನೆಯ ಮಾತೆಯಾಗಿರುವಳು...